- This event has passed.
Excursions
August 4
ಸ್ನೇಹ ಸೇವಾ ಟ್ರಸ್ಟ್ ಸುದ್ದಿ
25-26ರ ಶೈಕ್ಷಣಿಕ ವರ್ಷದ ಜ್ಞಾನಸಿರಿ ಯೋಜನೆ ಮತ್ತು ಇತರ ಕಾರ್ಯಕ್ರಮಗಳ ಉದ್ಘಾಟನೆ. ಭಾನುವಾರ 27 ಜುಲೈ 2025 ಕುಟುಂಬ ಪ್ರಬೋಧನ ಪ್ರಕಲ್ಪದ ಮಾರ್ಗದರ್ಶಕರಾದ ಶ್ರೀಯುತ ಸು ರಾಮಣ್ಣ ಅವರು ಮುಖ್ಯ ಭಾಷಣ ಮಾಡಿ, ಮಕ್ಕಳಿಗೆ ಓಂಕಾರ ಮತ್ತು ಪ್ರಾಣಾಯಾಮದ ಮಹತ್ವನ್ನು ವಿವರಿಸಿದರು. ವಿದ್ಯಾರ್ಥಿಗಳು ‘ದಾರಿ ತಪ್ಪದ ಮಕ್ಕಳು’ ಆಗಬೇಕು, ಅಷ್ಟೇ ಅಲ್ಲದೆ ದಾರಿ ತಪ್ಪಿದವರಿಗೆ ದಾರಿ ತೋರಿಸುವ ಮಕ್ಕಳಾಗಬೇಕು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಿಗೆ ಸರಿ ದಾರಿ ತೋರುವಲ್ಲಿ ಟ್ರಸ್ಟ್ ನಡೆಸುವ ಸಂಸ್ಕಾರ ಕೇಂದ್ರದ ಪಾತ್ರವನ್ನು ಶ್ಲಾಘಿಸಿದರು. 24-25ರ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಹಾಗೆಯೇ ಸಾಂಕೇತಿಕವಾಗಿ ಸ್ಕೂಲ್ ಕಿಟ್ ವಿತರಿಸಲಾಯಿತು. ಮುಂದಿನ ದಿನಗಳಲ್ಲಿ, ಹಲವು ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಸುಮಾರು 1000 ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸ್ಕೂಲ್ ಕಿಟ್ ವಿತರಿಸಲಾಗುವುದು.
25-26ರ ಶೈಕ್ಷಣಿಕ ವರ್ಷದ ಜ್ಞಾನಸಿರಿ ಯೋಜನೆಗೆ ಆಯ್ಕೆಯಾದ ಸುಮಾರು 350 ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ, ಟ್ರಸ್ಟಿನ ಸ್ಕಾಲರ್ಶಿಪ್ ಪ್ರಾಜೆಕ್ಟಿನಲ್ಲಿ ಓದಿ ಈಗ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಮಂಜುನಾಥ್, ಜ್ಞಾನಸಿರಿ ಯೋಜನೆಗೆ ತಮ್ಮ ದೇಣಿಗೆಯನ್ನು ನೀಡಿದ್ದು ವಿಶೇಷವಾಗಿತ್ತು.
ಸಾಫ್ಟ್ ವೇರ್ ಉದ್ಯಮಿ ಸುಂದರ್ ಕಣ್ಣನ್ ಮಾತನಾಡಿ , ಜೀವನದಲ್ಲಿ ಏನನ್ನಾದರೂ ಸಾಧಿಸುವ ಕನಸು ಇರಬೇಕು. ಕನಸು ಅಂದರೆ ನಿದ್ದೆ ಮಾಡಿದಾಗ ಬರುವುದಲ್ಲ, ನಿದ್ದೆ ಮಾಡದಂತೆ ನಿಮ್ಮನ್ನು ಎಚ್ಚರವಾಗಿಟ್ಟುರುವಂತೆ ನಿಮಗೆ ಗುರಿ ಇರಬೇಕು. ಅದಕ್ಕೆ ತಕ್ಕಂತೆ ಶಿಸ್ತು, ಪರಿಶ್ರಮ ಮತ್ತು ಇಚ್ಚಾಶಕ್ತಿ ಇರಬೇಕು ಎಂದು ಹೇಳಿದರು.
ಹಾಗೆಯೇ ಈಗಾಗಲೇ ೧೦ನೇ ತರಗತಿ ಓದಿ, ಕಾಲೇಜ್ ಸೇರಿರುವ ವಿದ್ಯಾರ್ಥಿಗಳ ಪೋಷಕರು, ಸ್ನೇಹ ಸೇವಾ ಟ್ರಸ್ಟಿನ ಸಂಸ್ಕಾರ ಕೇಂದ್ರ ಮತ್ತು ಟ್ಯೂಷನ್ ತರಗತಿಗಳು ತಮ್ಮ ಮಕ್ಕಳ ಮೇಲೆ ಬೀರಿದ ಪ್ರಭಾವ ಅವರು ಹೆಚ್ಚು ಅಂಕ ಗಳಿಸುವಲ್ಲಿ ಸಹಾಯ ಮಾಡಿತೆಂದು ಒಕ್ಕೊರಲಿನಿಂದ ಹೇಳಿದರು.