Loading Events

« All Events

  • This event has passed.

ಸ್ನೇಹ ಸೇವಾ ಟ್ರಸ್ಟ್ ಸುದ್ದಿ – ಭಾನುವಾರ 23 ಮಾರ್ಚ್ 2025

May 27 @ 11:41 am

ಶೈಕ್ಷಣಿಕ ವರ್ಷ 2025-26ರ ಸಾಲಿನ ಜ್ಞಾನಸಿರಿ ವಿದ್ಯಾರ್ಥಿ ವೇತನಕ್ಕೆ ನಡೆಸಿದ ಅರ್ಹತಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಸಂದರ್ಶನಕ್ಕಾಗಿ ಕರೆಯಲಾಗಿತ್ತು. ಸುಮಾರು 160 ವಿದ್ಯಾರ್ಥಿಗಳನ್ನು 8 ತಂಡಗಳು ಸಂದರ್ಶನ ಮಾಡಿದರು.
ಪೋಷಕರ ಆರ್ಥಿಕ ಸ್ಥಿತಿ, ವಿದ್ಯಾರ್ಥಿಗಳ ಆಸಕ್ತಿ, ಇತ್ಯಾದಿ ವಿಷಯಗಳನ್ನು ತಿಳಿದು, ಮುಂದಿನ ಹಂತಕ್ಕೆ ಸುಮಾರು 140 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.
ಟ್ರಸ್ಟಿನ ವಾಲಂಟಿಯರ್-ಗಳು , ಇವರ ಮನೆಗಳಿಗೆ ಮುಂದಿನ ಒಂದು ತಿಂಗಳಿನಲ್ಲಿ ಭೇಟಿ ಕೊಟ್ಟು ಪರಿಶೀಲನೆ ಮಾಡಿದ ನಂತರ ವಿದ್ಯಾರ್ಥಿಗಳನ್ನು ಸ್ಕಾಲರ್ಶಿಪ್ಪಿಗೆ ಆಯ್ಕೆ ಮಾಡಲಾಗುವುದು.
ವಿದ್ಯಾರ್ಥಿಗಳ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಲು ಟ್ರಸ್ಟಿಗೆ ವಾಲಂಟಿಯರ್-ಗಳ ಅವಶ್ಯಕತೆ ಇದೆ. ನಿಮಗೆ ಆಸಕ್ತಿ ಇದ್ದಲ್ಲಿ , 98444 54949 ಸಂಪರ್ಕಿಸಿ . ಸಮಾಜಸೇವೆಯಲ್ಲಿ ನಮ್ಮೊಂದಿಗೆ ಜತೆಗೂಡಿ.

Details

Date:
May 27
Time:
11:41 am